ಕುಟುಕುಟು ಜುಗಾರಿ ಅಡ್ಡೆಗೆ ಬದಿಯಡ್ಕ ಪೊಲೀಸರ ದಾಳಿ;ಇಬ್ಬರ ಸೆರೆ, 4650 ರೂ.ವಶ


 ಬದಿಯಡ್ಕ: ಕುಟುಕುಟು ಜುಗಾರಿ ಆಟದಲ್ಲಿ ನಿರತರಾಗಿದ್ದ ಇಬ್ಬರನ್ನು ಬದಿಯಡ್ಕ ‌ಪೊಲೀಸರು ಬಂಧಿಸಿದ್ದಾರೆ. ಬೇಳ ಚೌಕಾರು ನಿವಾಸಿ ಹರೀಶ್(33), ಬಜಕೂಡ್ಲು ನಿವಾಸಿ ಪ್ರವೀಣ್(33) ಬಂಧಿತರು. ಪಳ್ಳಕಾನ ಪ್ರಯಾಣಿಕರ ತಂಗುದಾಣ ಬಳಿ ಆರೋಪಿಗಳ ಬಂಧನ ನಡೆದಿದೆ. ಆಟಕ್ಕೆ ಬಳಸಿದ 4650 ರೂ.ಸಹ ವಶಪಡಿಸಲಾಗಿದೆ. ಬದಿಯಡ್ಕ ಎಸ್.ಐ.ರೂಪೇಶ್ ನೇತೃತ್ವದಲ್ಲಿ ದಾಳಿ ನಡೆದಿತ್ತು.  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು